info@kpsmamadapur.in
(+91) 98801 06116

ನಮ್ಮ ಬಗ್ಗೆ

ಕರ್ನಾಟಕ ಪಬ್ಲಿಕ್ ಸ್ಕೂಲಗಳು ಕರ್ನಾಟಕ ಸರ್ಕಾರದ ಪ್ರತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು ಎಂಬ ನೀತಿಯನ್ವಯ ವಿವಿಧ ಹಂತದ ಶಾಲೆಗಳು ಆಡಳಿತ್ಮಾಕ, ಶೈಕ್ಷಣಿಕ, ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಸ್ಥಾಪಿಸಲಾಗಿದೆ. ಪೂರ್ವ ಪ್ರಾಥಮಿಕ ಹಂತದಿಂದ ಪದವಿ ಪೂರ್ವ ಕಾಲೇಜಿನ ತರಗತಿಯವರೆಗೆ ಶಿಕ್ಷಣ ನೀಡುವ ಶಾಲೆಗಳೇ "ಕರ್ನಾಟಕ ಪಬ್ಲಿಕ್ ಸ್ಕೂಲಗಳು"

ಕರ್ನಾಟಕ ಪಬ್ಲಿಕ್ ಸ್ಕೂಲಗಳು ಗುಣಮಟ್ಟದ ಶಿಕ್ಷಣ ನೀಡುವ, ವಿದ್ಯಾರ್ಥಿ ಕೇಂದ್ರಿತ, ಸಮುದಾಯ ಮುಖಿ ಮತ್ತು ಸಮಾಜ ಬೆಂಬಲಿತ ಶಾಲೆಗಳನ್ನಾಗಿ ಉತ್ಕೃಷ್ಟತೆಯ ಕೇಂದ್ರಗಳು ಆಗಿ ಪರಿವರ್ತಿಸಲಾಗುವುದು

  • ಪ್ರಾಥಮಿಕ ತರಗತಿಗಳಿಗೆ ೧:೩೦, ಪ್ರೌಢ ತರಗತಿಗಳಿಗೆ ೧:೪೦ ಹಾಗೂ ಪದವಿ ಪೂರ್ವ ತರಗತಿಗಳಿಗೆ ೧:೬೦ ಶಿಕ್ಷಕ-ವಿದ್ಯಾರ್ಥಿ ಅನುಪಾತ ನಿಗದಿ
  • ಎಲ್ಲ ಹಂತದ ಶಿಕ್ಷಕರ ವಿಷಯ ಪರಿಣಿತಿ , ಅನುಭವ , ಜ್ಯಾನ , ಕೌಶಲ್ಯ, ಎಲ್ಲ ವಿದ್ಯಾರ್ಥಿಗಳಿಗೂ ತಲುಪಿಸುವುದು
  • ಪ್ರತಿ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಗೆ ಆಧ್ಯ ಗಮನ
  • ಇಂಗ್ಲಿಷ್ ಮತ್ತು ಗಣಿತ ವಿಷಯಗಳ ಭೋದನೆಗೆ ವಿಶೇಷ ಗಮನ
  • ಪ್ರಾಥಮಿಕ ಹಂತದ ಕನ್ನಡ ಮಾಧ್ಯಮ ನಲಿ-ಕಲಿ ತರಗತಿಗಳಲ್ಲಿ , ಇಂಗ್ಲಿಷ್ ಭೋದನೆಗೆ "ಇಂಗ್ಲಿಷ್ ನಲಿ ಕಲಿ " ಅನುಷ್ಠಾನ
  • ಮಕ್ಕಳ ವ್ಯಕ್ತಿಗತ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ
  • ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ

ಒಂದೇ ಸೂರಿನಡಿಯಲ್ಲಿ ಒದಗಿಸುವ ಗುಣಮಟ್ಟದ ಶಿಕ್ಷಣಕ್ಕೆ ಊರಿನವರು , ಇಲಾಖೆಯವರು, ಹಿತೈಷಿಗಳು, ಸಹೋದ್ಯೋಗಿಗಳು, ಮಿತ್ರರು, ಸರ್ವರ ಸಹಕಾರ-ಬೆಂಬಲ ನಿರೀಕ್ಷಿಸಿತ್ತೇವೆ